ತ್ರಿಪುರ ಸುಂದರಿ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ. ಇದು 2023 ರ ಜನವರಿ 2 ರಿಂದ 7 ಅಕ್ಟೋಬರ್ 2023ರವೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಂಡಿತು. == ಕಥಾವಸ್ತು == ಗಂಧರ್ವ ಲೋಕದ ಸುಂದರವಾದ ಹುಡುಗಿಯಾದ ಆಮ್ರಪಾಲಿ (ಅಮ್ಮು), ಗಂಧರ್ವ ಲೋಕದ ಏಕೈಕ ರಕ್ಷಕನಾದ ಗಂಧರ್ವ ರಾಜಕುಮಾರನನ್ನು(ಪ್ರದ್ಯುಮ್ನ) ಹುಡುಕುವ ಕಾರ್ಯಾಚರಣೆಯಲ್ಲಿದ್ದಾಳೆ. ಆಕೆಯ ಉದ್ದೇಶವು ಆಕೆಯನ್ನು ಅನಾನುಕೂಲ ಸ್ಥಳವಾದ ಭೂಲೋಕಕ್ಕೆ ಕರೆದೊಯ್ಯುತ್ತದೆ. ಅಮ್ಮು, ಪ್ರದ್ಯುಮ್ನನ ಕುಟುಂಬದೊಂದಿಗೆ ವಾಸಿಸಲು ಪ್ರಾರಂಭ ಮಾಡುತ್ತಾಳೆ. ಪ್ರದ್ಯುಮ್ನ ಈ ಕುಟುಂಬದ ವಾರಸುದಾರನಾಗಿರುತ್ತಾನೆ. ಸ್ವಲ್ಪ ದಿನಗಳ ನಂತರ ಪ್ರದ್ಯುಮ್ನನೇ ಗಂಧರ್ವ ರಾಜಕುಮಾರನೆಂದು ಅವಳಿಗೆ ಗೊತ್ತಾಗುತ್ತದೆ. == ಪಾತ್ರವರ್ಗ == ದಿವ್ಯಾ ಸುರೇಶ್: ಆಮ್ರಪಾಲಿ / ಅಮ್ಮು ಪಾತ್ರದಲ್ಲಿ, ಗಂಧರ್ವ ರಾಜಕುಮಾರಿಯಾಗಿ. ಅಭಿನವ್ ವಿಶ್ವನಾಥನ್: - ಪ್ರದ್ಯುಮ್ನ ಪಾತ್ರದಲ್ಲಿ ಗಂಧರ್ವ ರಾಜಕುಮಾರನಾಗಿ. ಸತ್ಯಜಿತ್ ಮತ್ತು ದೇವಯಾನಿಯ ದತ್ತು ಮಗ. ರೇಖಾ ಪ್ರಸಾದ್: ದೇವಯಾನಿಯಾಗಿ, ಬದಲಿಗೆ ಸಂಗೀತಾ ಭಟ್ ಹರ್ಷ ನಾಗ್ಪಾಲ್: ನೀನಾದ್ ಪಾತ್ರದಲ್ಲಿ, ಪ್ರದ್ಯುಮ್ನ್, ಛಾಯಾ , ಅನ್ಯಾ ಮತ್ತು ಬೃಂದಾಳ ಸಹೋದರನಾಗಿ. ಪೃಥ್ವಿ: ಬ್ರುಂಡನಾಗಿ ಹರ್ಷಿತಾ ಛಾಯಾ ಪಾತ್ರದಲ್ಲಿ ರೋಹಿತ್ ಶ್ರೀನಾಥ್ === ವಿಶೇಷಪಾತ್ರದಲ್ಲಿ === ದಿಶಾ ಮದನ್: ಪ್ರದ್ಯುಮ್ನನ ಹೆತ್ತತಾಯಿ ಪಾತ್ರದಲ್ಲಿ == ನಿರ್ಮಾಣ == ಈ ಕಾರ್ಯಕ್ರಮವು ಕಲರ್ಸ್ ಕನ್ನಡದಲ್ಲಿ ವೃದ್ಧಿ ಕ್ರಿಯೇಷನ್ಸ್ ನ ಮೊದಲ ಕಾಲ್ಪನಿಕ ನಿರ್ಮಾಣವಾಗಿದೆ. ಮೊದಲ ಪ್ರೊಮೊವನ್ನು 12 ಡಿಸೆಂಬರ್ 2022 ರಂದು ಪ್ರಾರಂಭಿಸಲಾಯಿತು. ಮೊದಲ ಪ್ರದರ್ಶನವು 2 ಜನವರಿ 2023 ರಂದು ಪ್ರಸಾರವಾಯಿತು. == ಉಲ್ಲೇಖಗಳು == == ಬಾಹ್ಯಕೊಂಡಿಗಳು == ದಲ್ಲಿ ತ್ರಿಪುರ ಸುಂದರಿ